ಐಪಿಎಲ್ 14 ನಡೆಯೋದು ಈ ಎರಡೇ ಮೈದಾನದಲ್ಲಿ?

ಮುಂಬೈ| Krishnaveni K| Last Modified ಭಾನುವಾರ, 21 ಫೆಬ್ರವರಿ 2021 (09:07 IST)
ಮುಂಬೈ: ಕ್ಕೆ ಈಗಾಗಲೇ ತಯಾರಿ ಆರಂಭಿಸಿದೆ. ಆಟಗಾರರ ಹರಾಜು ಪ್ರಕ್ರಿಯೆಯೂ ಮುಗಿದಿದೆ. ಆದರೆ ಪಂದ್ಯಗಳು ನಡೆಯೋದು ಎರಡೇ ಮೈದಾನದಲ್ಲಿ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

 
ಕೊರೋನಾ ಕಾರಣದಿಂದಾಗಿ ಕಳೆದ ಆವೃತ್ತಿಯನ್ನು ಯುಎಇಗೆ ಸ್ಥಳಾಂತರಿಸಲಾಗಿತ್ತು. ಈ ವರ್ಷ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಆದರೆ ಮುಂಬೈ ಮತ್ತು ಅಹಮ್ಮದಾಬಾದ್ ನ ಬೃಹತ್ ಕ್ರೀಡಾಂಗಣ ಮೊಟೇರಾದಲ್ಲಿ ಮಾತ್ರವೇ ಎಲ್ಲಾ ಪಂದ್ಯಗಳು ನಡೆಯಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಬಿಸಿಸಿಐ ಈ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ.
ಇದರಲ್ಲಿ ಇನ್ನಷ್ಟು ಓದಿ :