ಚೆನ್ನೈ: ಐಪಿಎಲ್ 14 ರಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ಗೆ ಕೋಲ್ಕೊತ್ತಾ ನೈಟ್ ರೈಡರ್ಸ್ ಸವಾಲಾಗಲಿದೆ. ಇಂದಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಎರಡೂ ತಂಡಗಳೂ ಸಮಬಲರು. ಕಳೆದ ಸೀಸನ್ ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದವು. ಹೀಗಾಗಿ ಈ ಬಾರಿಯೂ ಅದೇ ಪೈಪೋಟಿ ನಿರೀಕ್ಷಿಸಲಾಗಿದೆ.ಹೈದರಾಬಾದ್ ಗೆ ಬೌಲಿಂಗ್ ಜೊತೆಗೆ ನಾಯಕ ಡೇವಿಡ್ ವಾರ್ನರ್ ಶಕ್ತಿ. ಇತ್ತ ಕೋಲ್ಕೊತ್ತಾಗೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸೇರ್ಪಡೆ ಹೊಸ ಹುಮ್ಮಸ್ಸು ನೀಡಿದೆ.