ಮುಂಬೈ: ಐಪಿಎಲ್ 14 ರ ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ ನಲ್ಲಿ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಜೊತೆಗೆ ವೇಳಾಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದೆ. ಆದರೆ 25 ದಿನಗಳ ಕಾಲ ನಡೆಯಲಿರುವ ಈ ಬ್ಯುಸಿ ಶೆಡ್ಯೂಲ್ ನಲ್ಲಿ ವಿದೇಶೀ ಆಟಗಾರರು ಭಾಗವಹಿಸುತ್ತಾರೆ ಎಂಬುದೇ ಅನುಮಾನವಾಗಿದೆ. ಈಗಾಗಲೇ ಎಲ್ಲಾ ಕ್ರಿಕೆಟ್ ರಾಷ್ಟ್ರಗಳ ವೇಳಾಪಟ್ಟಿ ನಿಗದಿಯಾಗಿದೆ. ಇದರ ನಡುವೆ ಈ ಕಿರು ಅವಧಿಯಲ್ಲಿ ಐಪಿಎಲ್ ಆಡಲು ವಿದೇಶೀ ಆಟಗಾರರು ಬರುವುದು ಅನುಮಾನ.ಈಗಾಗಲೇ ಬಿಸಿಸಿಐ ವಿದೇಶೀ ಕ್ರಿಕೆಟ್ ಮಂಡಳಿಗಳೊಂದಿಗೆ