ನೈಟ್ ಕರ್ಫ್ಯೂ ಐಪಿಎಲ್ ಗೆ ಅನ್ವಯವಾಗಲ್ಲ

ಮುಂಬೈ| Krishnaveni K| Last Modified ಮಂಗಳವಾರ, 6 ಏಪ್ರಿಲ್ 2021 (08:57 IST)
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ನಿಯಂತ್ರಿಸಲು ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ ಬೆನ್ನಲ್ಲೇ ಐಪಿಎಲ್ ಗೂ ನಿರ್ಬಂಧ ಅನ್ವಯವಾಗುತ್ತದಾ ಎಂಬ ಅನುಮಾನಗಳಿಗೆ ಮಹಾರಾಷ್ಟ್ರ ಸರ್ಕಾರ ಉತ್ತರ ನೀಡಿದೆ.

 
ಕೊರೋನಾ ನಿಯಂತ್ರಿಸಲು ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಐಪಿಎಲ್ ಪಂದ್ಯಗಳು, ತರಬೇತಿಗೆ ನೈಟ್ ಕರ್ಫ್ಯೂ ನಿರ್ಬಂಧ ಅನ್ವಯವಾಗುತ್ತದಾ ಎಂಬ ಆತಂಕ ಮನೆ ಮಾಡಿತ್ತು.
 
ಆದರೆ ಐಪಿಎಲ್ ಗೆ ಈ ನಿಯಮ ಅನ್ವಯವಾಗಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಐಪಿಎಲ್ ಪಂದ್ಯಗಳು ನಿರಾತಂಕವಾಗಿ ನಡೆಯಲಿದ್ದು, ರಾತ್ರಿ 8 ರ ನಂತರ ತರಬೇತಿಯನ್ನೂ ಮಾಡಬಹುದು ಎಂದು ಸರ್ಕಾರ ಹೇಳಿದೆ. ಇದರೊಂದಿಗೆ ಐಪಿಎಲ್ ಮೇಲಿದ್ದ ದೊಡ್ಡ ಆತಂಕ ನಿವಾರಣೆಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :