ಅಹಮ್ಮದಾಬಾದ್: ಐಪಿಎಲ್ 2022 ರಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದ್ದು, ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಪರಸ್ಪರ ಸೆಣಸಾಡಲಿವೆ.ರಾಜಸ್ಥಾನ್ ರಾಯಲ್ಸ್ ಈ ಮೊದಲು ಶೇನ್ ವಾರ್ನ್ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಅದಾದ ಬಳಿಕ ಯಾಕೋ ರಾಜಸ್ಥಾನ್ ಆರಕ್ಕೇರದ ಮೂರಕ್ಕಿಳಿಯದ ಆಟವಾಡಿತ್ತು. 2008 ರಲ್ಲಿ ಐಪಿಎಲ್ ಆರಂಭವಾದಾಗ ಮೊದಲ ಬಾರಿಗೆ ಚಾಂಪಿಯನ್ ಆದ ಹಿರಿಮೆ ರಾಜಸ್ಥಾನ್ ನದ್ದು. ಅದಾದ ಬಳಿಕ ಎಷ್ಟೋ ನಾಯಕರು, ಆಟಗಾರರು ಬಂದು ಹೋದರೂ ಅದೃಷ್ಟ ಖುಲಾಯಿಸಿರಲಿಲ್ಲ.