ಅಹಮ್ಮದಾಬಾದ್: ರಾಜಸ್ಥಾನ್ ವಿರುದ್ಧ ನಡೆದ ಐಪಿಎಲ್ 2022 ರ ಫೈನಲ್ ಪಂದ್ಯವನ್ನು ಗೆದ್ದ ಗುಜರಾತ್ ಟೈಟನ್ಸ್ ಆಡಿದ ಮೊದಲ ಕೂಟದಲ್ಲೇ ಚಾಂಪಿಯನ್ ಆದ ದಾಖಲೆ ಮಾಡಿದೆ.ನಿನ್ನೆಯ ಪಂದ್ಯದಲ್ಲಿ ರಾಜ್ಥಾನ್ ನೀಡಿದ್ದ 131 ರನ್ ಗಳ ಗುರಿ ಬೆನ್ನತ್ತಿದ ಗುಜರಾತ್ 18.1 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿ ಗೆಲುವು ಕಾಣುವುದರ ಮೂಲಕ ಮೊದಲ ಬಾರಿಗೆ ಚಾಂಪಿಯನ್ ಎನಿಸಿಕೊಂಡಿತು.ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ಈ ಸಾಧನೆ ಮಾಡಿತ್ತು.