ಅಹಮ್ಮದಾಬಾದ್: ಐಪಿಎಲ್ 2022 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ 2 ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.ಎಲಿಮಿನೇಟರ್ ಪಂದ್ಯದಲ್ಲಿ 14 ರನ್ ಗಳಿಂದ ಗೆದ್ದು ಪ್ರಶಸ್ತಿ ಕನಸು ಜೀವಂತವಾಗಿಟ್ಟಿರುವ ಆರ್ ಸಿಬಿ ಇಂದು ಮಹತ್ವದ ಪಂದ್ಯವಾಡಲಿದೆ. ಇಂದು ಗೆದ್ದಲ್ಲಿ 2016 ರ ನಂತರ ಐಪಿಎಲ್ ಫೈನಲ್ ಗೇರಿದ ಸಾಧನೆ ಮಾಡಲಿದೆ.ಇತ್ತ ರಾಜಸ್ಥಾನ್ ರಾಯಲ್ಸ್ ಕೂಡಾ ಬಲಿಷ್ಠ ತಂಡವೇ. ಬೆಂಗಳೂರು ಬ್ಯಾಟಿಗರಿಗೆ ಹೆಸರಾದರೆ, ರಾಜಸ್ಥಾನ್ ಬೌಲಿಂಗ್