ಮುಂಬೈ: ಅಕ್ಟೋಬರ್-ನವಂಬರ್ ತಿಂಗಳ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಈಗ ಕೊರೋನಾದಿಂದಾಗಿ ಅನಿಶ್ಚಿತತೆಯಲ್ಲಿದೆ. ಆದರೆ ಈ ಟೂರ್ನಿ ಮುಂದೂಡಿಕೆಯಾದರೆ ಐಪಿಎಲ್ ಗೆ ಲಾಭವಾಗಲಿದೆ! ಹೀಗಂತ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ಟೇಲರ್ ಹೇಳಿದ್ದಾರೆ. ವಿಶ್ವಕಪ್ ಎಂದ ತಕ್ಷಣ ವಿಶ್ವದ ಏಳು ರಾಷ್ಟ್ರಗಳ ತಂಡಗಳು, ಅಭಿಮಾನಿಗಳು ಆಸ್ಟ್ರೇಲಿಯಾಕ್ಕೆ ಬರುತ್ತಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಇಷ್ಟು ದೊಡ್ಡ ಬಳಗವನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ಟಿ20 ಟೂರ್ನಮೆಂಟ್ ಮುಂದೂಡಬೇಕಾಗುತ್ತದೆ.ಆ ವೇಳೆಯಲ್ಲಿ