Widgets Magazine

ಆರ್ ಸಿಬಿ ಲೋಗೋ ನೋಡಿ ಟಾಂಗ್ ಕೊಟ್ಟ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ

ಮುಂಬೈ| Krishnaveni K| Last Modified ಶನಿವಾರ, 15 ಫೆಬ್ರವರಿ 2020 (11:11 IST)
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ಲೋಗೋ ಪ್ರಕಟಿಸುತ್ತಿದ್ದಂತೇ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ಟಾಂಗ್ ಕೊಟ್ಟಿದ್ದಾರೆ.

 
ಟ್ವಿಟರ್ ನಲ್ಲಿ ಆರ್ ಸಿಬಿ ಲೋಗೋ ನೋಡಿ ನಾಯಕ ವಿರಾಟ್ ಕೊಹ್ಲಿ ‘ಲೋಹೋ ಕಾ ಕಾಮ್ ಹೈ ಕೆಹನಾ’ ಎಂದು ಅಭಿನಂದಿಸಿ ಟ್ವೀಟ್ ಮಾಡಿದ್ದರೆ, ಆರ್ ಸಿಬಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್ ವೇಗಿ ಜಸ್ಪ್ರೀತ್ ಬುಮ್ರಾ ‘ಲೋಗೋ ನೋಡಿದರೆ ಬೌಲಿಂಗ್ ಆಕ್ಷನ್ ಥರಾ ಇದೆ’ ಎಂದು ಕಾಲೆಳೆದಿದ್ದಾರೆ.
 
ಐಪಿಎಲ್ ಆರಂಭವಾಗಲು ಇನ್ನೇನು ಒಂದು ತಿಂಗಳು ಬಾಕಿಯಿದ್ದು, ಆರ್ ಸಿಬಿಯಲ್ಲಾದ ಈ ಹೊಸ ಬದಲಾವಣೆಯಿಂದಾದರೂ ಅದೃಷ್ಟ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :