ಇಬ್ಬರು ಕನ್ನಡಿಗರ ಕೈ ಬಿಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್

ಮುಂಬೈ| Krishnaveni K| Last Modified ಗುರುವಾರ, 21 ಜನವರಿ 2021 (08:42 IST)
ಮುಂಬೈ: ಮುಂದಿನ ಐಪಿಎಲ್ ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಾನು ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಹೊರಹಾಕಿದ್ದು, ಈ ಪೈಕಿ ಇಬ್ಬರು ಕನ್ನಡಿಗ ಆಟಗಾರರು ಸೇರಿದ್ದಾರೆ.

 
ಕರ್ನಾಟಕ ಮೂಲದ ಕರುಣ್ ನಾಯರ್ ಮತ್ತು ಕೆ ಗೌತಮ್ ರನ್ನು ಪಂಜಾಬ್ ಕೈ ಬಿಟ್ಟಿದೆ. ಆದರೆ ಕೆಎಲ್ ರಾಹುಲ್ ರನ್ನು ಉಳಿಸಿಕೊಂಡಿದೆ. ಪಂಜಾಬ್ ಕೈ ಬಿಟ್ಟ ಪ್ರಮುಖ ಆಟಗಾರರಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತೊಬ್ಬರು. ಮ್ಯಾಕ್ಸ್ ವೆಲ್ ಪ್ರದರ್ಶನ ಬಗ್ಗೆ ಕಳೆದ ಐಪಿಎಲ್ ನಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ನಿರೀಕ್ಷೆಯಂತೇ ಅವರನ್ನು ಕೈ ಬಿಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :