ಐಪಿಎಲ್ 14: ರಾಹುಲ್ ಪಡೆ ವಿರುದ್ಧ ಆರ್ ಸಿಬಿಗೆ ಸೋಲು

ಮುಂಬೈ| Krishnaveni K| Last Modified ಶನಿವಾರ, 1 ಮೇ 2021 (07:16 IST)
ಮುಂಬೈ: ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಸೋಲು ಕಂಡಿದೆ. ಕಿಂಗ್ಸ್ ಪಂಜಾಬ್ ವಿರುದ್ಧ 34 ರನ್ ಗಳಿಂದ ಸೋತಿದೆ.

 
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಾಯಕ ಕೆಎಲ್ ರಾಹುಲ್ ಭರ್ಜರಿ ಆಟದಿಂದಾಗಿ (ಅಜೇಯ 91) ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಕ್ರಿಸ್ ಗೇಲ್ 46 ರನ್ ಗಳಿಸಿದರು.
 
ಈ ಮೊತ್ತ ಬೆನ್ನತ್ತಿದ ಆರ್ ಸಿಬಿಗೆ ಅಗ್ರ ಬ್ಯಾಟ್ಸ್ ಮನ್ ಗಳು ಕೈ ಕೊಟ್ಟರು. ನಾಯಕ ಕೊಹ್ಲಿ 35 ರನ್ ಗಳಿಸಿದರಾದರೂ ಎಬಿಡಿ, ಗ್ಲೆನ್ ಮ್ಯಾಕ್ಸ್ ವೆಲ್, ದೇವದತ್ತ್ ಪಡಿಕ್ಕಲ್ ಕಳಪೆ ಮೊತ್ತಕ್ಕೆ ಔಟಾಗಿದ್ದು ದೊಡ್ಡ ಆಘಾತ ನೀಡಿತು. ಕೊನೆಯ ಹಂತದಲ್ಲಿ ಹರ್ಷಲ್ ಪಟೇಲ್ 13 ಎಸೆತಗಳಿಂದ 31 ರನ್ ಗಳಿಸಿ ಮಿಂಚಿದರು. ಆದರೆ ಅಂತಿಮವಾಗಿ ಆರ್ ಸಿಬಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದರಲ್ಲಿ ಇನ್ನಷ್ಟು ಓದಿ :