ಮುಂಬೈ: ಐಪಿಎಲ್ 2022 ರಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.ಕೆಕೆಆರ್ ಸತತವಾಗಿ ಸೋಲುಂಡು ಈಗ ಗೆಲುವಿನ ಹುಡುಕಾಟದಲ್ಲಿದೆ. ಆರಂಭದಲ್ಲಿ ಇದ್ದ ಉತ್ಸಾಹ, ಬ್ಯಾಟಿಗರಲ್ಲಿ ಫಾರ್ಮ್ ಈಗ ಕಾಣುತ್ತಿಲ್ಲ. ಇದರಿಂದಾಗಿಯೇ ತಂಡ ಸೋಲು ಕಾಣುತ್ತಿದೆ.ಇತ್ತ ರಾಜಸ್ಥಾನವೂ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಅನುಭವಿಸಿದ್ದು, ಮತ್ತೆ ಗೆಲುವು ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಜೋಸ್ ಬಟ್ಲರ್ ಮೇಲೆ ರಾಜಸ್ಥಾನ್ ಬ್ಯಾಟಿಂಗ್ ಅವಲಂಬಿತವಾಗಿದೆ. ಬೌಲಿಂಗ್ ನಲ್ಲಿ ತಂಡ ಬಲಿಷ್ಠವಾಗಿದೆ.