ಮುಂಬೈ: ಐಪಿಎಲ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿಯಾಗಿದೆ.ಎರಡೂ ತಂಡಗಳೂ ಸತತ ಗೆಲುವಿನಿಂದ ಒಂದೇ ರೀತಿಯ ಅಂಕ ಸಂಪಾದಿಸಿಕೊಂಡಿದ್ದು ಇಂದಿನ ಪಂದ್ಯದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಿಸಬಹುದು. ಲಕ್ನೋಗೆ ಕೆಎಲ್ ರಾಹುಲ್ ಅವರೇ ಆಧಾರ ಸ್ತಂಬ.ಇತ್ತ ಆರ್ ಸಿಬಿ ಪರ ನಾಯಕ ಫಾ ಡು ಪ್ಲೆಸಿಸ್ ಮೊದಲ ಪಂದ್ಯದಲ್ಲಿ ಮಿಂಚಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಹೇಳಿಕೊಳ್ಳುವ ಬ್ಯಾಟಿಂಗ್ ನಡೆಸಿಲ್ಲ.