ಭಾರತದ ಕೊರೋನಾ ಸಂಕಷ್ಟಕ್ಕೆ ಅರ್ಧ ಸಂಬಳವನ್ನೇ ದಾನ ಮಾಡಿದ ವಿಂಡೀಸ್ ಕ್ರಿಕೆಟಿಗ

ನವದೆಹಲಿ| Krishnaveni K| Last Modified ಶನಿವಾರ, 1 ಮೇ 2021 (07:37 IST)
ನವದೆಹಲಿ: ಭಾರತದಲ್ಲಿ ಕೊರೋನಾ ಪ್ರಕರಣಗಳು ಮಿತಿ ಮೀರಿದ್ದು, ಜನರ ಜೀವನ ಸಂಕಷ್ಟದಲ್ಲಿರುವುದನ್ನು ನೋಡಿ ವಿಂಡೀಸ್ ಮೂಲದ ಕಿಂಗ್ಸ್ ಪಂಜಾಬ್ ಐಪಿಎಲ್ ತಂಡದ ಕ್ರಿಕೆಟಿಗ ಭಾರೀ ದೇಣಿಗೆ ನೀಡಿದ್ದಾರೆ.
 > ಐಪಿಎಲ್ ನಲ್ಲಿ ತಾನು ಸಂಪಾದಿಸಿದ ಅರ್ಧದಷ್ಟು ಹಣವನ್ನು ಭಾರತದ ಕೊರೋನಾ ಪರಿಹಾರ ನಿಧಿಗೆ ಅರ್ಪಿಸಲು ಪೂರನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.>   ಭಾರತದ ಸಂಕಷ್ಟ ಸ್ಥಿತಿಗೆ ಮರುಗಿರುವ ಅವರು ಜನರು ಸ್ವಯಂ ಪ್ರೇರಿತರಾಗಿ ಸಹಾಯಕ್ಕೆ ಧಾವಿಸುವಂತೆ ಕರೆ ನೀಡಿದ್ದಾರೆ. ನನಗೆ ಕೆಲವು ವರ್ಷಗಳಿಂದ ಪ್ರೀತಿ ಕೊಡುತ್ತಿರುವ ದೇಶದಲ್ಲಿ ಸಂಕಷ್ಟವಾಗಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ಎಲ್ಲರೂ ಇದಕ್ಕೆ ಕೈ ಜೋಡಿಸಬೇಕಿದೆ’ ಎಂದು ಪೂರನ್ ಮನವಿ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :