ಚೆನ್ನೈ: ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗಾಯಾಳುಗಳ ಚಿಂತೆ ಕಾಡಿದೆ. ಆಲ್ ರೌಂಡರ್ ಜಡೇಜಾ ಈ ಆವೃತ್ತಿಗೆ ಲಭ್ಯರಿರುವುದು ಅನುಮಾನವಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಗಾಯಗೊಂಡಿದ್ದ ಜಡೇಜಾ ನಂತರ ಇಂಗ್ಲೆಂಡ್ ವಿರುದ್ಧ ನಡೆದ ತವರಿನ ಸರಣಿಯಲ್ಲೂ ಫಿಟ್ನೆಸ್ ಪಡೆದಿರಲಿಲ್ಲ. ಈ ಕಾರಣಕ್ಕೆ ಅವರು ಐಪಿಎಲ್ ಗೂ ಲಭ್ಯರಾಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ.ಈ ಬಗ್ಗೆ ನಮಗೂ ಸ್ಪಷ್ಟತೆಯಿಲ್ಲ. ಜಡೇಜಾ ತಂಡಕ್ಕೆ ಮರಳುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ’