Widgets Magazine

ಈ ಐಪಿಎಲ್ ನಲ್ಲಿ ವಿಶೇಷ ಜೆರ್ಸಿ ತೊಡಲಿರುವ ಆರ್ ಸಿಬಿ ಹುಡುಗರು

ದುಬೈ| Krishnaveni K| Last Modified ಶುಕ್ರವಾರ, 18 ಸೆಪ್ಟಂಬರ್ 2020 (12:34 IST)
ದುಬೈ: ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟಿಗರು ವಿಶೇಷ ಜೆರ್ಸಿಯನ್ನು ತೊಟ್ಟು ಮೈದಾನಕ್ಕಿಳಿಯಲಿದ್ದಾರೆ.
 

ಕೊರೋನಾದಿಂದಾಗಿ ಇಡೀ ಜಗತ್ತೇ ತಲ್ಲಣಿಸಿತ್ತು. ಈ ವೇಳೆ ಕೊರೋನಾ ವಿರುದ್ಧ ತಮ್ಮ ವೈಯಕ್ತಿಕ ಜೀವನವನ್ನೂ ಪಣಕ್ಕಿಟ್ಟು ಆರೋಗ್ಯ ಕಾರ್ಯಕರ್ತರು ಕೆಲಸ ಮಾಡಿದ್ದರು. ಈ ಕೋವಿಡ್ ವೀರರಿಗಾಗಿ ಕೊಹ್ಲಿ ಪಡೆ  ವಿಶೇಷ ಜೆರ್ಸಿ ತೊಡಲಿದೆ. ತಮ್ಮ ಜೆರ್ಸಿಗಳಲ್ಲಿ ಆರ್ ಸಿಬಿ ಕ್ರಿಕೆಟಿಗರು ಮೈ ಕೊವಿಡ್ ಹೀರೋಸ್ ಎಂದು ಬರೆಸಿಕೊಂಡಿದ್ದಾರೆ. ಈ ಮೂಲಕ ಈ ಐಪಿಎಲ್ ನ್ನು ಕೊರೋನಾ ವಾರಿಯರ್ಸ್ ಗಳಿಗಾಗಿ ಅರ್ಪಣೆ ಮಾಡಲಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :