ದುಬೈ: ಐಪಿಎಲ್ 14 ನೇ ಆವೃತ್ತಿಯ ಉಳಿದ ಭಾಗದ ಪಂದ್ಯಗಳನ್ನು ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಎಇಗೆ ಬಂದಿಳಿದಿದೆ. ದೇವದತ್ತ್ ಪಡಿಕ್ಕಲ್, ನವದೀಪ್ ಸೈನಿ, ಕೆಎಸ್ ಭರತ್, ಪವನ್ ದೇಶ್ ಪಾಂಡೆ, ಮೊಹಮ್ಮದ್ ಅಜರುದ್ದೀನ್ ಮುಂತಾದ ಕ್ರಿಕೆಟಿಗರ ದಂಡು ಯುಎಇಗೆ ತಲುಪಿದೆ.ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರುವ ಕ್ರಿಕೆಟಿಗರು ಬಳಿಕವಷ್ಟೇ ತಂಡ ಕೂಡಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 20 ರಂದು ಆರ್ ಸಿಬಿ ಕೋಲ್ಕೊತ್ತಾ ನೈಟ್ ರೈಡರ್ಸ್