ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ವಾರಂಟೈನ್ ಅವಧಿ ಮುಗಿಸಿ ಪ್ರಿ ನೆಟ್ ಸೆಷನ್ ಆರಂಭಿಸಿದೆ. ಪ್ರತೀ ಬಾರಿಯೂ ಕಪ್ ನಮ್ದೇ ಎಂದು ಅಭಿಮಾನಿಗಳು ಹುರಿದುಂಬಿಸುತ್ತಿದ್ದರೂ ಕೊಹ್ಲಿ ಹುಡುಗರು ಮಾತ್ರ ಅದಕ್ಕೆ ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಈ ಬಾರಿಯಾದರೂ ಆ ಅಪವಾದ ತೊಡೆದು ಹೋಗಲಿದೆ ಎಂಬ ವಿಶ್ವಾಸ ಎಲ್ಲರದ್ದು.ಈ ಬಾರಿಯ ಐಪಿಎಲ್ ಗೆ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಮಾರ್ಗದರ್ಶನ ಮಾಡಲು