ಐಪಿಎಲ್ 14: ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿ ಆರ್ ಸಿಬಿ

ಮುಂಬೈ| Krishnaveni K| Last Modified ಸೋಮವಾರ, 3 ಮೇ 2021 (09:25 IST)
ಮುಂಬೈ: ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

 
ಕಳೆದ ಪಂದ್ಯದಲ್ಲಿ ಸೋತಿರುವ ಆರ್ ಸಿಬಿ ಈಗ ಮತ್ತೆ ಗೆಲುವಿನ ಹಳಿಗೆ ಮರಳು ತವಕದಲ್ಲಿದೆ. ಆರ್ ಸಿಬಿಗೆ ಎಬಿಡಿ ವಿಲಿಯರ್ಸ್, ದೇವದತ್ತ್ ಪಡಿಕ್ಕಲ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಪ್ರಮುಖ ಅಸ್ತ್ರ. ಇವರಲ್ಲಿ ಇಬ್ಬರು ಕೈ ಕೊಟ್ಟರೂ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದೆ.
 
ಇತ್ತ ಕೋಲ್ಕೊತ್ತಾ ನೈಟ್ ರೈಡರ್ಸ್ ಸತತ ಸೋಲಿನಿಂದ ಕಂಗೆಟ್ಟಿದ್ದು, ಗೆಲುವಿನ ತವಕದಲ್ಲಿದೆ. ಕೆಕೆಆರ್ ಗೆ ಹೋಲಿಸಿದರೆ ಆರ್ ಸಿಬಿ ಮೇಲ್ನೋಟಕ್ಕೆ ಫೇವರಿಟ್ ತಂಡವೆನಿಸುತ್ತದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :