ಬೆಂಗಳೂರಿನ ಕೊರೋನಾ ಪರಿಸ್ಥಿತಿಗೆ ನೆರವಾಗಲಿರುವ ಆರ್ ಸಿಬಿ ಕ್ರಿಕೆಟ್ ತಂಡ

ಬೆಂಗಳೂರು| Krishnaveni K| Last Modified ಸೋಮವಾರ, 3 ಮೇ 2021 (09:36 IST)
ಬೆಂಗಳೂರು: ದೇಶದೆಲ್ಲೆಡೆ ಕೊರೋನಾ ರುದ್ರತಾಂಡವವಾಡುತ್ತಿದೆ. ಈ ನಡುವೆ ಐಪಿಎಲ್ ತಂಡಗಳು ತಮ್ಮಿಂದಾದ ದೇಣಿಗೆ, ನೆರವು ನೀಡುತ್ತಿವೆ. ಇದೀಗ ಆ ಸಾಲಿಗೆ ಆರ್ ಸಿಬಿ ಕೂಡಾ ಸೇರಿಕೊಂಡಿದೆ.

 
ಆರ್ ಸಿಬಿ ಈ ಬಗ್ಗೆ ಪ್ರಕಟಣೆ ನೀಡಿದ್ದು, ವಿರಾಟ್ ಕೊಹ್ಲಿ ಮತ್ತು ತಂಡ ಬೆಂಗಳೂರಿನ ಕೊರೋನಾ ಪೀಡಿತರಿಗೆ ನೆರವಾಗಲಿದೆ ಎಂದು ಹೇಳಿದೆ. ಸದ್ಯಕ್ಕೆ ಬೆಂಗಳೂರು ಮತ್ತು ಇತರ ನಗರಗಳಿಗೆ ವೈದ್ಯಕೀಯ ಸಲಕರಣೆ ತೀರಾ ಅಗತ್ಯವಿದೆ ಎಂದು ಮನಗಂಡು ಆರ್ ಸಿಬಿ ನೆರವಾಗಲಿದೆ.
 
ಪ್ರತೀ ಬಾರಿ ಆರ್ ಸಿಬಿ ಪರಿಸರ ಕಾಳಜಿಗಾಗಿ ಒಂದು ಪಂದ್ಯವನ್ನು ಹಸಿರು ಜೆರ್ಸಿ ತೊಟ್ಟು ಆಡುತ್ತದೆ. ಆದರೆ ಈ ಬಾರಿ ಪಿಪಿಇ ಕಿಟ್ ಬಣ್ಣದ ನೀಲಿ ಜೆರ್ಸಿ ತೊಟ್ಟು ಒಂದು ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಧರಿಸಿದ ಜೆರ್ಸಿಗಳನ್ನು ಕ್ರಿಕೆಟಿಗರ ಸಹಿ ಪಡೆದು ಹರಾಜಿಗೊಳಪಡಿಸಲಿದೆ. ಈ ಹರಾಜಿನಲ್ಲಿ ಬಂದ ಹಣವನ್ನು ಕೊರೋನಾ ಪರಿಹಾರಕ್ಕೆ ಬಳಸಲಿದೆ ಎಂದು ಆರ್ ಸಿಬಿ ಪ್ರಕಟಿಸಿದೆ.
ಇದರಲ್ಲಿ ಇನ್ನಷ್ಟು ಓದಿ :