ಮುಂಬೈ: ಐಪಿಎಲ್ ನಲ್ಲಿ ನಿನ್ನೆ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧವೂ ಸೋಲುವುದರೊಂದಿಗೆ ಒಂದೇ ಒಂದು ಗೆಲುವು ಕಾಣದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹತಾಶೆಗೊಳಗಾಗಿದ್ದಾರೆ.ನಿನ್ನೆ ಪಂದ್ಯದ ಬಳಿಕ ನಿರೂಪಕರ ಮುಂದೆ ಮಾತನಾಡಲು ಬಂದಾಗ ರೋಹಿತ್ ಮುಖದಲ್ಲಿ ಹತಾಶೆ ಎದ್ದು ಕಾಣುತ್ತಿತ್ತು. ಇದರ ಜೊತೆಗೆ ನಿರೂಪಕರು ಕೇಳುವ ಪ್ರಶ್ನೆಯೂ ಪ್ರೇಕ್ಷಕರ ಸದ್ದಿಗೆ ಕೇಳದೇ ಹೋದಾಗ ರೋಹಿತ್ ಕೆಂಡಾ ಮಂಡಲರಾದರು.ಕ್ಯಾಮರಾ ಟೆಕ್ನಿಷಿಯನ್ ಗೆ ಸೌಂಡ್ ಜಾಸ್ತಿ ಮಾಡೋ ಎಂದು ಕೂಗಾಡಿದರು.