ಪ್ಲೇ ಆಫ್ ಗೂ ಮುನ್ನ ತಂಡ ತೊರೆದ ಕೆಕೆಆರ್ ಆಲ್ ರೌಂಡರ್!

ದುಬೈ| Krishnaveni K| Last Modified ಸೋಮವಾರ, 11 ಅಕ್ಟೋಬರ್ 2021 (12:18 IST)
ದುಬೈ: ರಲ್ಲಿ ಇಂದು ನಡೆಯಲಿರುವ ಆರ್ ಸಿಬಿ ಮತ್ತು ಕೆಕೆಆರ್ ನಡುವಿನ ಎರಡನೇ ಪ್ಲೇ ಆಫ್ ಪಂದ್ಯಕ್ಕೂ ಮೊದಲು ಕೆಕೆಆರ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ತಂಡ ತೊರೆದಿದ್ದಾರೆ.
 > ಕೋಲ್ಕೊತ್ತಾ ತಂಡದ ಪ್ರಮುಖ ಆಲ್ ರೌಂಡರ್ ಆಗಿರುವ ಶಕೀಬ್ ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ತಮ್ಮ ಬಾಂಗ್ಲಾದೇಶ ತಂಡ ಸೇರಿಕೊಳ್ಳಲು ಐಪಿಎಲ್ ತಂಡ ತೊರೆದಿದ್ದಾರೆ.>   ಇದು ಕೆಕೆಆರ್ ಗೆ ಹೊಡೆತ ನೀಡಲಿದೆ. ನಿನ್ನೆ ಬಾಂಗ್ಲಾ ತಂಡ ಯುಎಇಗೆ ಬಂದಿಳಿದಿದೆ. ಐಪಿಎಲ್ ನ ಬೇರೆ ಬೇರೆ ಫ್ರಾಂಚೈಸಿಗಳಲ್ಲಿದ್ದ ಬಾಂಗ್ಲಾ ಆಟಗಾರರು ತಂಡ ಕೂಡಿಕೊಂಡಿದ್ದಾರೆ. ಇವರ ಜೊತೆಗೆ ಶಕೀಬ್ ಕೂಡಾ ಸೇರಿಕೊಳ್ಳಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :