ಐಪಿಎಲ್ ಗೆ ಹೊರಟ ಸೌರವ್ ಗಂಗೂಲಿ ಟ್ರೋಲ್ ಆಗಿದ್ದೇಕೆ?

ಮುಂಬೈ| Krishnaveni K| Last Modified ಬುಧವಾರ, 9 ಸೆಪ್ಟಂಬರ್ 2020 (09:40 IST)
ಮುಂಬೈ: ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಐಪಿಎಲ್ ಕೂಟದಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
 

ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಗಂಗೂಲಿ ವಿಮಾನವೇರುವ ಫೋಟೋಗಳನ್ನು ಪ್ರಕಟಿಸಿದ್ದು, ಕಳೆದ ಆರು ತಿಂಗಳ ಬಳಿಕ ಮೊದಲ ಬಾರಿಗೆ ವಿಮಾನ ಯಾನ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಆದರೆ ಗಂಗೂಲಿ ವಿಮಾನದಲ್ಲಿ ಏಕಾಂಗಿಯಾಗಿ ಎಕಾನಮಿ ಕ್ಲಾಸ್ ಸೀಟ್ ನಲ್ಲಿ ಕೂತಿರುವುದು ನೋಡಿ ನೆಟ್ಟಿಗರು ಕಾಲೆಳೆದಿದ್ದಾರೆ.
 
ಏನು ದಾದ ಏಕಾಂಗಿಯಾಗಿ ಪ್ರಯಾಣ ಮಾಡುತ್ತಿದ್ದೀರಾ? ಅದೂ ಎಕಾನಮಿ ಕ್ಲಾಸ್ ನಲ್ಲಿ ಎಂದು ಕೆಲವರು ತಮಾಷೆ ಮಾಡಿದರೆ ಮತ್ತೆ ಕೆಲವರು ಇಡೀ ಫ್ಲೈಟ್ ನೀವೊಬ್ರೇ ಬುಕ್ ಮಾಡಿದ್ದೀರಾ ಎಂದು ತಮಾಷೆ ಮಾಡಿದ್ದಾರೆ. ಜತೆಗೆ ದಾದನಿಗೊಂದು ಆಲ್ ದಿ ಬೆಸ್ಟ್ ಕೂಡಾ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :