ದುಬೈ: ಕೊರೋನಾ ಸೋಂಕಿನಿಂದ ತಲ್ಲಣಗೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ. ಪ್ರಮುಖ ಬ್ಯಾಟ್ಸ್ ಮನ್ ಸುರೇಶ್ ರೈನಾ ವೈಯಕ್ತಿಕ ಕಾರಣಗಳಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.ಅವರೀಗ ಭಾರತಕ್ಕೆ ವಾಪಸಾಗುತ್ತಿದ್ದಾರೆ ಎಂದು ಚೆನ್ನೈ ತಂಡ ಅಧಿಕೃತ ಪ್ರಕಟಣೆ ತಿಳಿಸಿದೆ. ಆದರೆ ಅವರು ಟೂರ್ನಿಯಿಂದ ಹಿಂದಕ್ಕೆ ಸರಿಯಲು ನಿಜ ಕಾರಣವೇನೆಂದು ತಿಳಿದುಬಂದಿಲ್ಲ. ಕಳೆದ ವಾರ ತಂಡದ ಜತೆಗೆ ಅವರೂ ದುಬೈಗೆ ಪ್ರಯಾಣ ಬೆಳೆಸಿ ಕ್ವಾರಂಟೈನ್ ನಲ್ಲಿದ್ದರು. ಆಗಾಗ ವರ್ಕೌಟ್