ಮುಂಬೈ: ಹಿಂದಿನ ಬಾರಿ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್ ಮಾಡಿದ ಘಟನೆ ಬಗ್ಗೆ ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.ಅಂದು ಕೊಹ್ಲಿ ಸ್ಲೆಡ್ಜಿಂಗ್ ಮಾಡಲು ಬಂದಾಗ ಸೂರ್ಯಕುಮಾರ್ ಯಾದವ್ ಮುಖ ತಿರುಗಿಸಿ ನಡೆದರು ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.ಇದೀಗ ಆ ಘಟನೆ ಬಗ್ಗೆ ನೆನೆಸಿಕೊಂಡಿರುವ ಸೂರ್ಯ ಆಗ ತನಗೆ ಯಾವ ರೀತಿ ಅನುಭವವಾಗಿತ್ತು ಎಂಬುದನ್ನು ವಿವರಿಸಿದ್ದಾರೆ. ‘ನಾನು ಆವತ್ತು ಹೇಗಾದರೂ ತಂಡಕ್ಕೆ ಗೆಲುವು ಕೊಡಿಸುವ ಪ್ರಯತ್ನದಲ್ಲಿದ್ದೆ.