Widgets Magazine

ಐಪಿಎಲ್ ಗೂ ಮೊದಲೇ ನಡೆಯಲಿದೆ ಟೀಂ ಇಂಡಿಯಾ ಆಟಗಾರರಿಗೆ ಡ್ರಿಲ್

ಮುಂಬೈ| Krishnaveni K| Last Modified ಶನಿವಾರ, 1 ಆಗಸ್ಟ್ 2020 (09:41 IST)
ಮುಂಬೈ: ಐಪಿಎಲ್ ಗೆ ಎಲ್ಲಾ ಕ್ರಿಕೆಟಿಗರು ತಯಾರಿ ನಡೆಸುತ್ತಿದ್ದರೆ ಅದಕ್ಕೂ ಮೊದಲೇ ಟೀಂ ಇಂಡಿಯಾ ಆಟಗಾರರಿಗೆ ಬಾಂಡಿಂಗ್ ಸೆಷನ್ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
 

ಕೊರೋನಾದಿಂದಾಗಿ ಹಲವು ದಿನಗಳಿಂದ ಪರಸ್ಪರ ಮುಖವನ್ನೂ ನೋಡದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕೆಲವು ದಿನಗಳ ಕಾಲ ತರಬೇತಿ ಕ್ಯಾಂಪ್ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿತ್ತು.
 
ಅದು ಐಪಿಎಲ್ ಗೂ ಮೊದಲೇ ನಡೆಯಲಿದೆ. ಯಾಕೆಂದರೆ ಐಪಿಎಲ್ ಮುಗಿದ ತಕ್ಷಣವೇ ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಸರಣಿ ಆಡಲು ತೆರಳಲಿದೆ. ಹೀಗಾಗಿ ಅದಕ್ಕೂ ಮೊದಲು ಆಟಗಾರರು ಕೆಲವು ದಿನ ಜತೆಯಾಗಿ ಕಳೆಯಲಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :