ಆರ್ ಸಿಬಿ ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್

ದುಬೈ| Krishnaveni K| Last Modified ಭಾನುವಾರ, 12 ಸೆಪ್ಟಂಬರ್ 2021 (14:20 IST)
ದುಬೈ: ಯುಎಇನಲ್ಲಿ ನಡೆಯಲಿರುವ ರ ಎರಡನೇ ಭಾಗದಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಅಬುದಾಬಿ ತಲುಪಿದ್ದಾರೆ.

 
ಇಂಗ್ಲೆಂಡ್ ಪ್ರವಾಸದಿಂದ ಆರ್ ಸಿಬಿ ತಂಡದ ಆಟಗಾರರು ವಿಶೇಷ ವಿಮಾನ ಮೂಲಕ ನೇರವಾಗಿ ಅರಬರ ನಾಡಿಗೆ ಬಂದಿಳಿದಿದ್ದಾರೆ. ರೋಹಿತ್ ಶರ್ಮಾ ಸೇರಿದಂತೆ ಮುಂಬೈ ಇಂಡಿಯನ್ಸ್ ತಂಡ ನಿನ್ನೆಯೇ ಅಬುದಾಬಿಗೆ ಬಂದಿಳಿದಿತ್ತು.
 
ಇಂದು ಟೀಂ ಇಂಡಿಯಾದಲ್ಲಿರುವ ಆರ್ ಸಿಬಿ ಆಟಗಾರರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಸೇರಿದಂತೆ ಇತರ ಆಟಗಾರರು ಅಬುದಾಬಿ ತಲುಪಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :