ಮುಂಬೈ: ಈ ಬಾರಿ ಕೊರೋನಾದಿಂದಾಗಿ ಇದುವರೆಗೆ ಐಪಿಎಲ್ ಕ್ರೀಡಾ ಕೂಟ ನಡೆದಿಲ್ಲ. ಕೆಲವರು ಖಾಲಿ ಮೈದಾನದಲ್ಲೂ ಆದರೂ ಸರಿಯೇ ಐಪಿಎಲ್ ನಡೆಯಲಿ ಎನ್ನುತ್ತಿದ್ದಾರೆ. ಈ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳುವುದೇನು ಗೊತ್ತಾ? ಈ ರೀತಿ ಕ್ರೀಡಾಕೂಟ ಆಯೋಜಿಸಬಹುದು. ಆದರೆ ಪ್ರೇಕ್ಷಕರ ಎದುರು, ಎಂಜಾಯ್ ಮಾಡುತ್ತಾ, ಪಂದ್ಯದ ಕೌತುಕವನ್ನು ಅನುಭವಿಸುತ್ತಾ ಆಡುವ ಮಜವೇ ಬೇರೆ. ಈ ಭಾವನೆಗಳನ್ನು ಪುನರ್ ಸೃಷ್ಟಿಸಲು ಅಸಾಧ್ಯ ಎಂದು ಕೊಹ್ಲಿ ಹೇಳಿದ್ದಾರೆ.ಕ್ರಿಕೆಟ್ ಆಡಬಹುದು.