ಬೆಂಗಳೂರು: ಚಿನ್ನಸ್ವಾಮಿ ಅಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ತವರಿನ ರಾಯಲ್ ಚಾಲೆಂಜರ್ಸ್ ಪಾಲಾಗಿದೆ.ಆರ್ ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಆರ್ ಸಿಬಿ 4 ವಿಕೆಟ್ ಗಳ ಜಯ ದಾಖಲಿಸಿದೆ. ಗೆಲುವಿಗೆ 156 ರನ್ ಬೆನ್ನತ್ತಿದ ಆರ್ ಸಿಬಿ 19.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ.ಆರಂಭದಲ್ಲಿಯೇ ಬ್ರೆಂಡಮ್ ಮೆಕಲಮ್ ವಿಕೆಟ್ ಕಳೆದುಕೊಂಡರೂ ಕ್ವಿಂಟನ್ ಡಿ ಕಾಕ್ 45 ರನ್ ಸಿಡಿಸಿ