ಬೆಂಗಳೂರು: ಮೊನ್ನೆಯ ಗೆಲುವಿನ ಸವಿಗನಸಲ್ಲಿ ಚಿನ್ನಸ್ವಾಮಿ ಅಂಗಣಕ್ಕೆ ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಇಂದು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಕೇರಳದ ಹುಡುಗ ಸಂಜು ಸ್ಯಾಮ್ಸನ್ ಶಾಕ್ ಕೊಟ್ಟರು.ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಗೆ ಆರಂಭ ಸಾಧಾರಣವಾಗಿತ್ತು. ಆದರೆ ಆರಂಭಿಕ ಡಿ ಶಾರ್ಟ್ ಔಟಾಗುತ್ತಿದ್ದಂತೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗಿಳಿದು ಬಂದ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ ಮೈಮೇಲೆ ಭೂತ ಹೊಕ್ಕಿದವರಂತೆ ಬ್ಯಾಟ್