Widgets Magazine

ಹಾಳಾದ ಮಳೆ

ಚೆನ್ನೈ| WD| Last Modified ಗುರುವಾರ, 20 ನವೆಂಬರ್ 2014 (16:53 IST)
ಹವಮಾನ ಕಛೇರಿಯಲ್ಲಿ ಕೆಲಸ ಮಾಡುವ ಅಧಿಕಾರಿ ತಮ್ಮ ಕೆಲಸ ಮುಗಿಸಿ ಕೆಳಗೆ ಬಂದ ನಂತರ, ಆಳನ್ನು ಕರೆದು ಹೇಳಿದರು.
ಮೇಲೆ ಕಿಟಕಿ ಬಾಗಿಲು ಹಾಕಿದ್ದೀಯಾ ತಾನೆ! ಈ ಹಾಳಾದ ಮಳೆ ಯಾವಾಗ ಬರುತ್ತೆ ಹೇಳೊಕೆ ಬರೊದಿಲ್ಲ.

ಹವಮಾನ ಅಧಿಕಾರಿ- ನಾಳೆ ಸಂಜೆ ಮಳೆ ಬರುತ್ತೆ ಅಂತ ವರದಿ ಕಳಿಸಿ
ಗುಮಾಸ್ತ- ಖಂಡಿತಾ ಬರುತ್ತಾ ಸಾರ್.
ಹವಮಾನ ಅಧಿಕಾರಿ- ಯಾಕ್ರಿ ಅನುಮಾನ?
ಗುಮಾಸ್ತ- ನನ್ನ ಹೆಂಡತಿ ಸಿನಿಮಾಕ್ಕೆ ಹೋಗಬೇಕು ಅಂತಾ ಅಂದ್ಲು ಸಾರ್ ಅದಕ್ಕೆ.

ಸಾರ್ ನಾನು ರಜೆಗೆ ಹೋಗ್ತಿನಿ.
ಮ್ಯಾನೇಜಿಂಗ್ ಡೈರೆಕ್ಟರ್- ನಾನು ಒಂದು ತಿಂಗಳಲ್ಲಿ ಊರನಲ್ಲಿರಲಿಲ್ಲ. ಅಷ್ಟು ಸಾಲದಾಯಿತೆ ನಿಮಗೆ?




ಇದರಲ್ಲಿ ಇನ್ನಷ್ಟು ಓದಿ :