ಅಶ್ಲೀಲ ಸಾಹಿತ್ಯ ಎಂದರೇನು?

ಬೆಂಗಳೂರು| Jagadeesh| Last Modified ಭಾನುವಾರ, 17 ಮಾರ್ಚ್ 2019 (19:22 IST)
ಅಶ್ಲೀಲ ಕುರಿತು ಪರ ವಿರೋಧಗಳು ನಡೆಯುತ್ತಿರುವುದಕ್ಕೆ ಕೊನೆ ಮೊದಲಿಲ್ಲ. ಆದರೂ ಸಾಹಿತ್ಯದ ಒಂದು ಮಜಲನ್ನು ಚೌಕಟ್ಟಿನಲ್ಲಿ ಸೀಮಿತಗೊಳಿಸುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅಶ್ಲೀಲ ಸಾಹಿತ್ಯದ ಕುರಿತು ನಮ್ಮ ಮಂಕ ಏನ್ ಹೇಳ್ತಿದ್ದಾನೆ ನೋಡೋಣ ಬನ್ನಿ.
ಅಶ್ಲೀಲ ಸಾಹಿತ್ಯ

“ಅಪ್ಪಾ.”
“ಏನೋ ಮಂಕಾ?”
“ಅಶ್ಲೀಲ ಸಾಹಿತ್ಯವೆಂದರೆ ಯಾವುದಪ್ಪಾ?”
“ಚಿಕ್ಕವರು ಓದಬಾರದ್ದು ಅಶ್ಲೀಲ ಸಾಹಿತ್ಯ.”
“ಹೀಗೆಂದು ದೊಡ್ಡವರು ಹೇಳ್ತಾರಲ್ವೇನಪ್ಪಾ?”
“ಅಹುದೋ ಮಂಕಾ.”
“ಚಿಕ್ಕವರಿದ್ದಾಗ ಓದಿ, ದೊಡ್ಡವರಾದ ಮೇಲೆ, ಚಿಕ್ಕವರು ಓದ ಕೂಡದು ಎಂಬುದಕ್ಕೇ ಅಶ್ಲೀಲ ಸಾಹಿತ್ಯವೆನ್ನುತ್ತಾರೇನಪ್ಪಾ?”
ಇದರಲ್ಲಿ ಇನ್ನಷ್ಟು ಓದಿ :