ಹನ್ನೇರಡನೆಯ ಶತಮಾನ ಕನ್ನಡನಾಡಿನಲ್ಲಿ ಬಹುಮುಖ ಕ್ರಾಂತಿಯನ್ನು ಉಂಟು ಮಾಡಿದ ಕಾಲ. ಈ ಕಾಲದ ಕ್ರಾಂತಿಯ ಮುಂಚೂಣಿಯಲ್ಲಿದ್ದವರು ಬಸವಣ್ಣನವರು ಸಾಮಾಜಿಕ,ಧಾರ್ಮಿಕ ಹಾಗೂ ಸಾಹಿತ್ಯಿಕ ವಲಯದಲ್ಲಿ ಸ್ಥಿತ್ಯಂತರಗಳಿಗೆ ಕಾರಣರಾದವರು.ಶರಣ ಧರ್ಮದ ಪ್ರಸಾರ, ಕಾಯಕ ನಿಷ್ಟೆ,ಮಾನವತಾವಾದದಲ್ಲಿ ದೃಡವಿಶ್ವಾಸದಂತಹ ಮೌಲಿಕ ವಿಚಾರಗಳನ್ನು ವಚನದ ಮೂಲಕ ಹರಡುವಲ್ಲಿ ಬಸವಣ್ಣ ಮಾಡಿದ ಅಂದೋಲನ ಇಂದಿಗೂ ಸಮಾಜ ಚಿಂತಕರಿಗೆ ದಾರಿದೀಪ.ಬಸವಣ್ಣನವರ ಹುಟ್ಟು ಹಾಗೂ ಬಾಲ್ಯದ ಕುರಿತು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ.ಬಿಜಾಪೂರ ಜಿಲ್ಲೆಯ ಬಸವನಬಾಗೆವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆ ಎಂಬುವರ ಮಗನಾಗಿ ಹುಟ್ಟಿದ