ಮಂಜುನಾಥ ಬಂಡಿ ಕೇವಲ ಒಂದು ದಶಕಗಳ ಹಿಂದೆ ತೀವ್ರ ಹಾನಿಯನ್ನನುಭವಿಸುತ್ತಾ ಅವಸಾನದ ಅಂಚಿಗೆ ತಳ್ಳಲ್ಪಡುತ್ತಿದ್ದ ಭಾರತೀಯ ರೈಲ್ವೆ ಇಲಾಖೆಗೆ ಕಾಯಕಲ್ಪ ನೀಡಿ ಹಾನಿಯನ್ನು ಹೊಡೆದೋಡಿಸಿ ಅಲ್ಪ ವರ್ಷಗಳಲ್ಲಿಯೇ ಅಪಾರ ಲಾಭದಲ್ಲಿ ಮುನ್ನಡೆಯುವಂತೆ ಮಾಡಿದ ನಮ್ಮ ರೈಲು ಸಚಿವ ಲಾಲೂ ಪ್ರಸಾದ್ ಯಾದವ್, ನಿತ್ಯವೂ ನೂತನ ಪ್ರಯೋಗಗಳಿಗೆ ಕೈಹಾಕುತ್ತಿರುವುದಲ್ಲದೇ ಅದರಲ್ಲಿ ಯಶಸ್ವಿಯೂ ಆಗುತ್ತಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಹ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ.ಪ್ರಯಾಣಿಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸುವುದರೊಂದಿಗೆ, ದೇಶಿ ಉತ್ಪನ್ನಗಳಿಗೆ ಬೇಡಿಕೆ ಬರುವ ನಿಟ್ಟಿನಲ್ಲಿ