ಹಾಸ್ಯ ಲೇಖನ ಬರೆಯುವುದು ತಮಾಷೆ ಸಂಗತಿಯಲ್ಲ. ಇದು ಸುಲಭವೆಂದುಕೊಂಡು ಬರೆಯುವ ಅನೇಕ ಮಂದಿಯ ಬರಹಗಳು ನಗು ಬರಿಸುವುದಿಲ್ಲ, ಬದಲಾಗಿ ಅವು ನಗೆಪಾಟಲಾಗುತ್ತವೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹಾಸ್ಯ ಬರಹಗಾರರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಇದು ಬ್ಲಾಗಿಗರಿಗೂ ಅನ್ವಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕನ್ನಡ ಬ್ಲಾಗ್ ಪ್ರಪಂಚದ ಆರಂಭದ ಹಂತದಿಂದ ಮಜಾವಾಣಿ (majavani.blogspot.com) ಎಂಬ ಬ್ಲಾಗ್ ಹಾಸ್ಯದ ಮಳೆಯನ್ನೇ ಸುರಿಸುತ್ತಿದೆ.2005 ರಲ್ಲಿ ಮಜಾವಾಣಿ ಪ್ರಾರಂಭಿಸಿದ ಬ್ಲಾಗ್ನ ಸಂಸ್ಥಾಪಕರು ವಾರ್ತಾ ವಿದೂಷಕ