ಕನ್ನಡ ಬ್ಲಾಗ್ ವಲಯದ ಆರಂಭಕಾಲದಿಂದಲೂ ನಿರಂತರವಾಗಿ ಬ್ಲಾಗ್ಗೆ ಪೂರ್ಣ ಮುಡಿಪು ಹಾಕಿ ಬರೆಯುತ್ತಿರುವ ಕೆಲವೇ ಮಂದಿಗಳಲ್ಲಿ ಸತೀಶ್ ಕುಮಾರ್ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಾಗಿರುವ ಸತೀಶ್ ಕುಮಾರ್ ಅವರ ಬ್ಲಾಗ್ ಹೆಸರು ಅಂತರಂಗ (antaranga.blogspot.com). ಹೆಸರೇ ಹೇಳುವಂತೆ ಇದು ಸತೀಶ್ ಅವರ ಅಂತರಂಗ ಅನಾವರಣಗೊಳ್ಳುವ ತಾಣವಾಗಿದೆ.ಅಮೆರಿಕದಲ್ಲಿದ್ದುಕೊಂಡು ಕನ್ನಡವನ್ನು ತುಂಬು ಸ್ಫೂರ್ತಿಯಿಂದ ಬರೆಯುವುದೆಂದರೆ ಅದು ದೊಡ್ಡ ವಿಚಾರವೇ. ಬಹುತೇಕ ಪ್ರತಿದಿನವೂ ಬ್ಲಾಗಿಗೆ ಬರೆಯುವ ಸತೀಶ್ ಅವರು ಅದರಲ್ಲಿ ಮನಸಿಗೆ