ಅಭಿಮನ್ಯು ಈ ಬಾರಿ ವೆಬ್ ಲೋಕದಲ್ಲಿ ವಿಹರಿಸುತ್ತಿದ್ದಾಗ ಎತ್ತಿಕೊಳ್ಳಲೇಬೇಕೆಂದು ಅನ್ನಿಸಿದ್ದು ಪಿಚ್ಚರ್ ಹೆಸರಿನ ಬ್ಲಾಗು. ಹೆಸರೇ ಹೇಳುವಂತೆ ಇದರಲ್ಲಿನ ವಿಷಯಗಳು ಬಹುತೇಕ ಚಿತ್ರರಂಗಕ್ಕೆ ಮೀಸಲು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಪಿಚ್ಚರ್ ಬ್ಲಾಗಿನ ಒಡೆಯ ಕೂಡ ಸಿನಿಮಾ ಪತ್ರಕರ್ತ.ಚಿತ್ರರಂಗದ ಆಗು ಹೋಗುಗಳು, ಗಾಂಧಿನಗರದ ಒಳಗಿನ ತುಡಿತಗಳು ಇಲ್ಲಿ ನವಿರಾಗಿ ಅಕ್ಷರ ರೂಪ ಪಡೆದು, ಥಳುಕು ಬಳುಕಿನ ಲೋಕವನ್ನು ಬಿಚ್ಚಿಡುತ್ತವೆ.ಈ ಬ್ಲಾಗಿನಲ್ಲಿ (pichchar.wordpress.com) ಇತ್ತೀಚೆಗೆ ಬಿಡುಗಡೆಯಾದ ಆ ದಿನಗಳು ಚಿತ್ರದ ವಿಮರ್ಶೆಯಲ್ಲಿ