ನವದೆಹಲಿ: ದೆಹಲಿ ಮತ್ತು ದೆಹಲಿ ಹತ್ತಿರವಿರುವ ಪ್ರದೇಶಗಳಲ್ಲಿ ಮತದಾನ ಮಾಡುವವರಿಗೆ ಒಂದು ಖುಷಿಯಾದ ಸುದ್ದಿಯೊಂದಿದೆ. ಮತದಾನದ ನಂತರ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಖರೀದಿಸಬಹುದಾಗಿದೆ. ದೆಹಲಿ, ನೋಯಿಡಾ ಗುಡಗಾಂವ್ ಮತ್ತು ರೊಹತಕ್ನಲ್ಲಿ ಸುಮಾರು 67 ಪೆಟ್ರೋಲ್ ಪಂಪ್ನಲ್ಲಿ 10 ಎಪ್ರಿಲ್ರಂದು ಮತದಾನನ ಮಾಡಿ ಪೆಟ್ರೋಲ್ ಖರೀದಿಸಲು ಬಂದವರಿಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 50 ಪೈಸೆ ರಿಯಾಯತಿ ಸಿಗಲಿದೆ.