ನಾಳೆಯಿಂದ ನಡೆಯಬೇಕಿದ್ದ ಕೋಲ್ ಇಂಡಿಯಾ ಕಾರ್ಮಿಕರ ಮುಷ್ಕರ ರದ್ದು

ವೆಬ್‌ದುನಿಯಾ| Last Modified ಭಾನುವಾರ, 22 ಸೆಪ್ಟಂಬರ್ 2013 (13:31 IST)
PR
PR
ಮುಂಬೈ: ಕೋಲ್ ಇಂಡಿಯಾ ಲಿ.ನ ಕಾರ್ಮಿಕ ಸಂಘಗಳು ಸೆಪ್ಟೆಂಬರ್ 23ರಿಂದ ನಡೆಸಬೇಕಿದ್ದ ಮೂರು ದಿನಗಳ ಮುಷ್ಕರವನ್ನು ಡಿಸೆಂಬರ್‌ಗೆ ಮುಂದೂಡಿದೆ. ಕಂಪನಿ ಅಧಿಕಾರಿಗಳ ಜತೆ ಮಾತುಕತೆ ಬಳಿಕ ಕಾರ್ಮಿಕ ಒಕ್ಕೂಟಗಳು ಈ ನಿರ್ಧಾರ ಕೈಗೊಂಡಿವೆ. ಕೋಲ್ ಇಂಡಿಯಾದ ಐದು ಕಾರ್ಮಿಕ ಸಂಘಗಳು ಮುಷ್ಕರದ ನೋಟೀಸ್ ನೀಡಿದ್ದವು. ಕಂಪೆನಿಯ ಶೇ. 5ರಷ್ಟು ಷೇರುಗಳನ್ನು ಮಾರುವ ಸರ್ಕಾರದ ನಿರ್ಧಾರವನ್ನು ಅವು ಮುಖ್ಯವಾಗಿ ಪ್ರತಿಭಟಿಸಿವೆ.


ಇದರಲ್ಲಿ ಇನ್ನಷ್ಟು ಓದಿ :