ಅನಿಲದಿಂದ ಓಡಲಿದೆ ರೈಲು

ನವದೆಹಲಿ| ವೆಬ್‌ದುನಿಯಾ| Last Modified ಸೋಮವಾರ, 23 ಸೆಪ್ಟಂಬರ್ 2013 (17:20 IST)
PR
ಕಲ್ಲಿದ್ದಲು ಆಧರಿತ ವಿದ್ಯುತ್ ಮತ್ತು ಡಿಸೇಲ್‌ ನಿಂದ ಆಗುತ್ತಿರುವ ಪರಿಸರ ಮಾಲಿನ್ಯ ಪರಿಶೀಲಿಸಿದ ನಂತರ ಇನ್ನೊಂದು ಮಾಲಿನ್ಯ ರಹಿತ ಇಂಧನ ಬಳಕೆ ಮಾಡುವ ವಿಚಾರ ನಡೆದಿದೆ. ಈ ಕಾರಣ ರೈಲ್ವೇನಲ್ಲಿ ಎಲ್‌ಎನ್‌ಜಿ ( ದ್ರವ ನೈಸರ್ಗಿಕ ) ಬಳಸುವ ಸಂಭವ ಎದ್ದು ಕಾಣುತ್ತಿದೆ. ರೆಲ್ವೆ ಎಂಜಿನಿಯರ್ ಗಳು ಈ ಕುರಿತು ಕಾರ್ಯನಿರ್ವಹಿಸುತ್ತಿದ್ದಾರೆ.

ಲಖ್ನೋದ ರೈಲ್ವೆಯ ಸಂಶೋಧನಾ ಮತ್ತು ಅಭಿವೃದ್ಧಿ ಮತ್ತು ಗುಣಮಟ್ಟದ ಸಂಸ್ಥೆಯಲ್ಲಿ ಎಲ್‌ಎನ್‌ಜಿ ಇಂಜಿನ್ ಬಗ್ಗೆ ಕೆಲಸ ನಡೆದೆ. ಒಂದು ವೇಳೆ ಇದು ಸಫಲವಾದರೆ, ಪ್ರಾರಂಭದಲ್ಲಿ 20 ಇಂಜಿನ್ ನಿರ್ಮಾಣ ಮಾಡಲಾಗುವುದು. ಒಂದು ವೇಳೆ ಇದು ಯಶಸ್ವಿಯಾದರೆ ಡಿಸೆಲ್ ಎಂಜಿನ್ ಬದಲು ಈ ಎಂಜಿನ್ ನಿರ್ಮಾಣ ಮಾಡುಲಾಗುವುದು.

ಡಿಸೇಲ್ ಎಂಜಿನ್ ಗಿಂತ ಈ ಎಲ್‌ಎನ್‌ಜಿ ಎಂಜಿನ್ ಕಡಿಮೆ ವೆಚ್ಚದ್ದಾಗಿರುತ್ತದೆ. ಇದರಿಂದ ಪರಿಸರ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಇದರಿಂದ ರೆಲ್ವೆಯ ವೆಚ್ಚಗಳು ಕೂಡ ಕಡಿಮೆಯಾಗುತ್ತವೆ. ಇದರ ಜೊತೆಗೆ ಕಾರ್ಬನ್ ಕ್ರೆಡಿಟ್ ಲಾಭ ಕೂಡ ಆಗಲಿದೆ.


ಇದರಲ್ಲಿ ಇನ್ನಷ್ಟು ಓದಿ :