ಬೋಶ್ಚ್ ಕಂಪೆನಿಯಿಂದ ರಾಜ್ಯದಲ್ಲಿ 1500 ಕೋಟಿ ರೂ. ಹೂಡಿಕೆ

ಬೆಂಗಳೂರು| ರಾಜೇಶ್ ಪಾಟೀಲ್|
PTI
ವಾಹನೋದ್ಯಮ, ಕೈಗಾರಿಕೆ ತಂತ್ರಜ್ಞಾನದ ಕ್ಷೇತ್ರಗಳಿಗೆ ಸೇವೆ ಮತ್ತು ತಂತ್ರಜ್ಞಾನ ಸರಬರಾಜು ಮಾಡುವ ಅಗ್ರ ಕಂಪೆನಿಯಾದ ಬೋಶ್ಚ್ ಮುಂದಿನ ಏಳು ವರ್ಷಗಳ ಅವಧಿಯಲ್ಲಿ 1500 ಕೋಟಿ ರೂಪಾಯಿಗಳ ಹೂಡಿಕೆಯನ್ನು ವಿಸ್ತರಿಸಿಲು ನಿರ್ಧರಿಸಿದೆ.

ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಹೆಚ್ಚಿಸಲು ಹೂಡಿಕೆಯನ್ನು ವಿಸ್ತರಿಸುತ್ತಿರುವುದಾಗಿ ಕಂಪೆನಿ ತಿಳಿಸಿದೆ.

53 ಬಿಲಿಯನ್ ಡಾಲರ್ ಮೌಲ್ಯದ ಯುರೋಪ್-ಜರ್ಮನ್ ಮೂಲದ ಕಂಪೆನಿ, ಸಲಕರಣೆಗಳ ತಯಾರಿಕೆಯಲ್ಲಿ ಆರು ದಶಕಗಳಿಂದ ತೊಡಗಿಸಿಕೊಂಡಿದ್ದು ಘಟಕವನ್ನು ಬೆಂಗಳೂರಿನಿಂದ ಸುಮಾರು 32 ಕಿ.ಮೀ ದೂರದಲ್ಲಿರುವ ಅಡುಗೋಡಿಯಿಂದ ಬಿಡಾದಿ ಸ್ಥಳಾಂತರಿಸಲಾಗುತ್ತಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಅಡುಗೋಡಿಯಲ್ಲಿರುವ ಕಚೇರಿಯನ್ನು ಭಾರತದ ಮುಖ್ಯ ಕಚೇರಿಯನ್ನಾಗಿ ಮುಂದುವರಿಸಲು ನಿರ್ಧರಿಸಿದ್ದು, ಸಂಶೋಧನೆಗಾಗಿ ಘಟಕವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.

ಕಂಪೆನಿಯ ವಹಿವಾಟು ವಿಸ್ತರಣೆಯಾಗಿದ್ದರಿಂದ ಘಟಕಕ್ಕೆ ಹೆಚ್ಚಿನ ಭೂಮಿ ಅಗತ್ಯವಾಗಿದ್ದರಿಂದ ಬಿಡಾದಿಗೆ ಸ್ಥಳಾಂತರಿಸಲಾಗಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸ್ಟೆಫೆನ್ ಬೆರ್ನ್ಸ್ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯೂ ಬಿಡಾದಿ ಮತ್ತು ಅಡುಗೋಡಿಯಲ್ಲಿ ಯೋಜನೆಗಳನ್ನು ಮುಂದುವರಿಸಲು ನಿರ್ಧರಿಸಿಲಾಗಿದೆ. ಮುಂದಿನ ಏಳು ವರ್ಷಗಳಲ್ಲಿ 1500 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಾಗುವುದು ಎಂದು ಜಂಟಿ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ವಿವರಣೆ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :