ಚಿನ್ನ ದರ ಕುಸಿತ; ಬೆಳ್ಳಿಗೆ 200 ರೂ ಹೆಚ್ಚಳ

ನವದೆಹಲಿ| ಇಳಯರಾಜ| Last Modified ಮಂಗಳವಾರ, 30 ಜೂನ್ 2009 (20:33 IST)
ಬೇಡಿಕೆ ತೀಕ್ಷ್ಣತೆ ಕಳೆದುಕೊಂಡ ಕಾರಣ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಕುಸಿತ ಕಂಡಿದ್ದರೆ, ಬೆಳ್ಳಿ ದರ 200 ರೂಪಾಯಿಗಳ ಏರಿಕೆ ಕಂಡು ಪ್ರತೀ ಕಿಲೋ ಒಂದಕ್ಕೆ 22,750 ರೂಪಾಯಿಗಳನ್ನು ಮುಟ್ಟಿದೆ.

ದಾಸ್ತಾನುಗಾರರು ಮತ್ತು ಕೈಗಾರಿಕಾ ಬಳಕೆದಾರರು ಖರೀದಿಗೆ ಮುಂದಾಗಿದ್ದೇ ಬೆಳ್ಳಿ ದರ ಮೇಲೆರಲು ಪ್ರಮುಖ ಕಾರಣವಾಯಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದೇ ಹೊತ್ತಿಗೆ ಖರೀದಿಯ ಬೆಂಬಲ ಕಳೆದುಕೊಂಡ ಚಿನ್ನವು ಕುಸಿದಿದೆ.

ಸ್ಟಾಂಡರ್ಡ್ ಮತ್ತು ಬೆಲೆಗಳಲ್ಲಿ ಒತ್ತಡ ಮುಂದುವರಿದಿದ್ದು 10 ರೂಪಾಯಿಗಳಂತೆ ಕುಸಿತ ಕಂಡು ಕ್ರಮವಾಗಿ 14,800 ಹಾಗೂ 14,650 ರೂಪಾಯಿಗಳನ್ನು ಪ್ರತೀ 10 ಗ್ರಾಂಗಳಿಗೆ ದಾಖಲಿಸಿದೆ. ಸೀಮಿತ ವ್ಯವಹಾರದಲ್ಲಿ ಎಂಟು ಗ್ರಾಂ ಚಿನ್ನದ ಗಟ್ಟಿಗೆ 12,400 ರೂಪಾಯಿಗಳನ್ನು ದಾಖಲಿಸಿವೆ.
ಸಿದ್ಧ ಬೆಳ್ಳಿ ಅದ್ಭುತ ದಾಖಲೆಯ ಏರಿಕೆಯೊಂದಿಗೆ ಪ್ರತೀ ಕಿಲೋವೊಂದಕ್ಕೆ 200 ರೂಪಾಯಿಗಳಂತೆ 22,750 ರೂಪಾಯಿಗಳನ್ನು ತಲುಪಿದೆ. ಅದೇ ಹೊತ್ತಿಗೆ ವಾರವನ್ನಾಧರಿಸಿದ ವಿತರಣೆಯು ಈ ಹಿಂದಿನ ವ್ಯವಹಾರದೊಳಗೆ ಅಂದರೆ ಪ್ರತೀ ಕೆ.ಜಿ.ಗೆ 22,450 ರೂಪಾಯಿಗಳನ್ನು ದಾಖಲಿಸಿತು.

ಬೆಳ್ಳಿ ನಾಣ್ಯಗಳು ಕೂಡ ಈ ಹಿಂದಿನ ಹಂತಗಳಲ್ಲೇ ಮುಂದುವರಿದಿದೆ. ಪ್ರತೀ 100 ಗಟ್ಟಿಗಳ ಖರೀದಿಗೆ 29,000 ಹಾಗೂ ಮಾರಾಟಕ್ಕೆ 29,100 ರೂಪಾಯಿಗಳು ಇಂದು ಕೂಡ ಕಂಡು ಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :