ರಿಸರ್ವ್ ಬ್ಯಾಂಕ್ ಇಂಡಿಯಾ ಗೋಷಿಸಿದಂತೆ ಇಂನಿಂದ 200 ರೂ. ಮುಖಬೆಲೆಯ ನೋಟುಗಳನ್ನ ಚಲಾವಣೆಗೆ ತರುತ್ತಿದೆ. ಹೊಸ ನೋಟಿನ ಆಸೆಯಲ್ಲಿ ಎಟಿಎಂಗೆ ಹೋದರೆ ನಿರಾಸೆಯಾಗಬಹುದು. ಯಾಕೆಂದರೆ, ದೇಶದ ಬಹುತೇಕ ಕಡೆ ಇವತ್ತು ಸರ್ಕಾರಿ ರಜೆ ಇರುವುದರಿಂದ ಬ್ಯಾಂಕ್`ಗಳಿಗೆ ಹೊಸ ನೋಟುಗಳ ಸರಬರಾಜು ಆಗಿರುವುದಿಲ್ಲ. ಆದರೂ ಗಣೇಶ ಹಬ್ಬದ ವಿಶೇಷ ದಿನ ಹೊಸ ನೋಟನ್ನ ಲಾಂಚ್ ಮಾಡಲಾಗುತ್ತಿದೆ. ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಎಟಿಎಂ ಮೆಶಿನ್ ಇರುವುದರಿಂದ ಅವುಗಳನ್ನ ರೀಕ್ಯಾಲಿಬ್ರೇಟ್ ಮಾಡಬೇಕಿದೆ.