Widgets Magazine

ಇನ್ಫೋಸಿಸ್ ನೇಮಕಾತಿ ಭಾರಿ ಪ್ರಮಾಣದಲ್ಲಿ ಕುಸಿತ

New Delhi| Rajendra| Last Modified ಮಂಗಳವಾರ, 14 ಫೆಬ್ರವರಿ 2017 (11:39 IST)
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ಫೋಸಿಸ್ ನೇಮಕಾತಿಗಳು ಭಾರಿ ಸಂಖ್ಯೆಯಲ್ಲಿ ಕಡಿಮೆಯಾಗಿವೆ. ಪ್ರತಿ ವರ್ಷ ಇನ್ಫೋಸಿಸ್ 20 ಸಾವಿರದಿಂದ 25 ಸಾವಿರ ಮಂದಿಗೆ ಉದ್ಯೊಗ ನೀಡುತ್ತಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ ಇಲ್ಲಿಯವರೆಗೆ 6,000 ಮಂದಿಗೆ ಮಾತ್ರ ಉದ್ಯೋಗ ನೀಡಲಾಗಿದೆ ಎಂದು ತೆಲಂಗಾಣ ಐಟಿ ವಿಭಾಗದ ಕಾರ್ಯದರ್ಶಿ ಜಯೇಶ್ ರಂಜನ್ ತಿಳಿಸಿದ್ದಾರೆ.

ವಿವಿಧ ಕಾರಣಗಳಿಂದ 7,000 ಮಂದಿ ಇನ್ಫೋಸಿಸ್ ಬಿಟ್ಟಿದ್ದಾರೆಂದು, ಇದರಿಂದ ಆಯ್ಕೆ ವಿಷಯದಲ್ಲಿ ಅನುಕೂಲವಾಯಿತೆಂದಿದ್ದಾರೆ. ಹೈದರಾಬಾದಿನಲ್ಲಿ ಇತ್ತೀಚೆಗೆ ನಡೆದ ಬಯೋ ಏಷಿಯಾ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ಇನ್ಫೋಸಿಸ್ ವ್ಯವಸ್ಥಾಪಕರಲ್ಲಿ ಒಬ್ಬರಾಗಿರುವ ನಾರಾಯಣ ಮೂರ್ತಿ ಈ ವಿವರಗಳನ್ನು ತನಗೆ ತಿಳಿಸಿದರು ಜಯೇಶ್ ಹೇಳಿದ್ದಾರೆ.

ಇನ್ಫೋಸಿಸ್‌ನ 33 ವರ್ಷಗಳ ಇತಿಹಾಸದಲ್ಲಿ ಈ ರೀತಿ ಋಣಾತ್ಮಕ ಬೆಳವಣಿಗೆ ದಾಖಲಾಗಿರುವುದು ಇದೇ ಮೊದಲು ಎಂಬ ನಾರಾಯಣ ಮೂರ್ತಿ ಅವರ
ಹೇಳಿಕೆಯನ್ನು ಉಲ್ಲೇಖಿಸಿ ಜಯೇಶ್ ವಿವರ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಇಂಡಿಯಾಸಾಫ್ಟ್-2017ರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :