ನವದೆಹಲಿ: ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್ ಉದ್ಯಮ ದಿನದಿಂದ ದಿನಕ್ಕೆ ಹೊಸತನ ಕಾಣುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲೂ ಮೊಬೈಲ್ ಕಂಪನಿಗಳು ಒಹಳಷ್ಟು ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿ ಹೊಸ ಮಾದರಿಯ ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಇದೀಗ ಮಾರುಕಟ್ಟೆಯಲ್ಲೇ ತನ್ನದೇ ಆದ ಗ್ರಾಹಕ ವಲಯವನ್ನು ಹೊಂದಿರುವ ಹುವಾವೇಯ ಉಪ ಬ್ರಾಂಡ್ ಆದ ಹಾನರ್ ಹೊಸ ತಂತ್ರಜ್ಞಾನದೊಂದಿಗೆ ತನ್ನ ನೂತನ ಮೊಬೈಲ್ ಅನ್ನು ಪರಿಚಯಿಸಿದೆ.