ಅಂಚೆ ಕಚೇರಿಗಳಲ್ಲಿ ಪಿಪಿಎಫ್, ಎನ್ಎಸ್ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಪ್ರಸ್ತುತ ಠೇವಣಿ ಹೊಂದಿರುವ ಠೇವಣಿದಾರರು ಡಿಸೆಂಬರ್ 31, 2017 ರೊಳಗೆ ಆಧಾರ ಕಾರ್ಡ್ ಸಂಖ್ಯೆಯನ್ನು ಅಂಚೆ ಕಚೇರಿಗೆ ನೀಡುವುದು ಕಡ್ಡಾಯವಾಗಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ. ಕೇಂದ್ರದ ವಿತ್ತಸಚಿವಾಲಯ ಪ್ರತ್ಯೇಕವಾಗಿ ನಾಲ್ಕು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅಂಚೆ ಕಚೇರಿಯಲ್ಲಿರುವ ಪಿಪಿಎಫ್, ಎನ್ಎಸ್ಎಸ್ ಮತ್ತು ಕಿಸಾನ್ ವಿಕಾಸ್