Widgets Magazine

ಇಂದು, ನಾಳೆ ಅಂಬಾನಿ ಪುತ್ರನ ಪ್ರಿವೆಡ್ಡಿಂಗ್ ಕಾರ್ಯಕ್ರಮ: ಕುಬೇರ ಪುತ್ರನ ಪಾರ್ಟಿ ಖರ್ಚು ಎಷ್ಟು ಗೊತ್ತಾ?!

ಮುಂಬೈ| Krishnaveni K| Last Modified ಭಾನುವಾರ, 24 ಫೆಬ್ರವರಿ 2019 (08:57 IST)
ಮುಂಬೈ: ರಿಲಯನ್ಸ್ ಸಂಸ್ಥೆ ಮುಖ್ಯಸ್ಥ, ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ವಿವಾಹ ಪೂರ್ವ ಕಾರ್ಯಕ್ರಮಗಳು ಇಂದು ಮತ್ತು ನಾಳೆ ಸ್ವಿಜರ್ಲ್ಯಾಂಡ್ ನ ಐಷಾರಾಮಿ ಹೋಟೆಲ್ ನಲ್ಲಿ ನಡೆಯಲಿದೆ.

 
ಈ ಕಾರ್ಯಕ್ರಮದ ವೈಭೋಗ ಕೇಳಿದರೆ ದಂಗಾಗುವಿರಿ. ಸ್ವಿಜರ್ಲ್ಯಾಂಡ್ ನ ಅತ್ಯಂತ ದುಬಾರಿ ಫೈವ್ ಸ್ಟಾರ್ ಹೋಟೆಲ್ ಸೈಂಟ್ ಮಾರಿಸ್ ನಲ್ಲಿ ಬ್ಯಾಚುಲರ್ ಪಾರ್ಟಿ, ಸೇರಿದಂತೆ ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ.
 
ಈ ಹೋಟೆಲ್ ನಲ್ಲಿ ಕನಿಷ್ಠ ಬೆಲೆಯ ರೂಂ ಎಂದರೆ 98,500 ರೂ.ಗಳ ಡಿಲಕ್ಸ್ ರೂಂ. ಇನ್ನು, ಪಕ್ಕದಲ್ಲೇ ಇರುವ ಸರೋವರದ, ಮಂಜಿನ ಪರ್ವತದ ಸುಂದರ ನಿಸರ್ಗದ ವ್ಯೂ ಇರುವ ಕೊಠಡಿಗಳು ಅತ್ಯಂತ ದುಬಾರಿಯಾಗಿದ್ದು, ಇವುಗಳ ಬೆಲೆ ಸುಮಾರು 4 ಲಕ್ಷಕ್ಕೂ ಅಧಿಕ! ಈ ವೀಕೆಂಡ್ ನಲ್ಲಿ ನಡೆಯಲಿರುವ ಪ್ರಿ ವೆಡ್ಡಿಂಗ್ ಪಾರ್ಟಿಗಾಗಿ ಹೋಟೆಲ್ ನ ಬಹುತೇಕ ಎಲ್ಲಾ ಕೊಠಡಿಗಳನ್ನೂ ಬುಕ್ ಮಾಡಲಾಗಿದೆ.
 
ಇದಲ್ಲದೆ, ಬರುವ ಅತಿಥಿಗಳಿಗಾಗಿ ಡ್ರೋನ್ ಶೋ, ಪಾರ್ಟಿ, ಮಸ್ತಿ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಅಂಬಾನಿ ಕುಟುಂಬ ಆಯೋಜಿಸಿದೆ. ಇದಕ್ಕಾಗಿ ಲಂಡನ್ ಮೂಲದ ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ.  ಮದುವೆ ಕಾರ್ಯಕ್ರಮಗಳು ಮಾರ್ಚ್ 9 ರಂದು ಮುಂಬೈಯ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :