Widgets Magazine

ಮೊಬೈಲ್ ಫೋನ್ ಗೂ ತಟ್ಟಿದ ವೈರಸ್ ಬಿಸಿ

London| Krishnaveni K| Last Modified ಮಂಗಳವಾರ, 30 ಮೇ 2017 (08:58 IST)
ಲಂಡನ್: ಇತ್ತೀಚೆಗೆ ರಾನ್ಸಮ್ ವೇರ್ ವೈರಸ್ ದಾಳಿಯಿಂದ ವಿಶ್ವದಾದ್ಯಂತ ಲಕ್ಷಗಟ್ಟಲೆ ಕಂಪ್ಯೂಟರ್ ಗಳು ಹ್ಯಾಕ್ ಆಗಿದ್ದಾಯ್ತು. ಇದೀಗ ಸ್ಮಾರ್ಟ್ ಫೋನ್ ಗಳ ಸರದಿ.

 
ಅಂಡ್ರಾಯ್ಡ್ ಫೋನ್ ಗಳಿಗೂ ವೈರಸ್ ದಾಳಿಯಾಗಿದೆ. ಒಂದು ಅಂದಾಜಿನ ಪ್ರಕಾರ 3.6 ಕೋಟಿ ಸ್ಮಾರ್ಟ್ ಫೋನ್ ಗಳು ವೈರಸ್ ದಾಳಿಗೆ ಹ್ಯಾಕ್ ಆಗಿವೆಯಂತೆ. ಜ್ಯೂಡಿ ಮಾಲ್ ವೇರ್ ಎಂಬ ವೈರಸ್ ಅಂಡ್ರಾಯ್ಡ್ ಫೋನ್ ಗಳ ಗೂಗಲ್ ಪ್ಲೇಯ ಸುಮಾರು 40 ಕ್ಕೂ ಹೆಚ್ಚು ಅಪ್ಲಿಕೇಷನ್ ಗಳಿಗೆ ವೈರಸ್ ದಾಳಿಯಾಗಿದೆ.
 
ಈ ಅಪ್ಲಿಕೇಷನ್ ನ್ನು ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಂಡರೆ ಮೊಬೈಲ್ ಹ್ಯಾಕ್ ಆಗುತ್ತದೆ. ಹೀಗಾಗಿ ಗೂಗಲ್ ಪ್ಲೇಯಲ್ಲಿರುವ ‘ಎನಿಸ್ಟುಡಿಯೋ ಕಾರ್ಪ್’ ಹೆಸರಿನ ಕಂಪನಿ ಅಭಿವೃದ್ಧಿಪಡಿಸಿದ ಅಪ್ಲಿಕೇಷನ್ ಗಳನ್ನು ಡೌನ್ ಲೋಡ್ ಮಾಡದಿರಿ. ಒಂದು ವೇಳೆ ಈ ಮೊದಲು ಡೌನ್ ಲೋಡ್ ಮಾಡಿದ್ದರೆ, ಡಿಲೀಟ್ ಮಾಡಿ.
 
ಈ ರೀತಿ ಮೊಬೈಲ್ ಹ್ಯಾಕ್ ಮಾಡುವ ಮೂಲಕ ಹ್ಯಾಕರ್ ಗಳು ನಿಮ್ಮ ಯಾವುದೇ ಮಾಹಿತಿ ಕದಿಯುತ್ತಾರಲ್ಲದೆ, ಮೊಬೈಲ್ ನಿಂದ ಆನ್ ಲೈನ್ ಹಣ ಪಾವತಿ, ಇತರ ಬ್ಯಾಂಕಿಂಗ್ ಮಾಹಿತಿ ಕದಿಯುವ ಅಪಾಯವಿದೆ. ಹಾಗಾಗಿ ಎಚ್ಚರವಿರಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :