Widgets Magazine

ರೂ.345ಕ್ಕೆ 28 ಜಿಬಿ ಡಾಟಾ ನೀಡಲಿರುವ ಏರ್‌ಟೆಲ್

New Delhi| Rajendra| Last Modified ಶನಿವಾರ, 4 ಮಾರ್ಚ್ 2017 (22:29 IST)
ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್‌ಗಳನ್ನು ಪ್ರಕಟಿಸುತ್ತಾ ಸಂಚಲನ ಸೃಷ್ಟಿಸುತ್ತಿರುವ ಜಿಯೋಗೆ ಪೈಪೋಟಿ ನೀಡಲು ಬೇರೆ ನೆಟ್‌ವರ್ಕ್ ಕಂಪೆನಿಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಪ್ರಮುಖ ಮೊಬೈಲ್ ಕಂಪೆನಿ ಏರ್‌ಟೆಲ್ ಬಳಕೆದಾರರಿಗೆ ಹೊಸ ಆಫರ್ ಪ್ರಕಟಿಸಿದೆ.

ಕೇವಲ ರೂ.345ಕ್ಕೆ ರೀಚಾರ್ಜ್ ಮಾಡಿಕೊಂಡರೆ ಅವರಿಗೆ 28 ಜಿಬಿ ಡಾಟಾ, ಅನಿಯಮಿತ ಲೋಕಲ್ ಮತ್ತು ಎಸ್ಟಿಡಿ ಕರೆಗಳನ್ನು ನೀಡಲಿದೆ. ದಿನಕ್ಕೆ 1ಜಿಬಿಯಂತೆ 28 ದಿನಗಳಿಗೆ ಬೆಳಗ್ಗೆ 500 ಎಂಬಿ, ರಾತ್ರಿ 500 ಎಂಬಿ ಡಾಟಾ ನೀಡುವುದಾಗಿ ಪ್ರಕಟಿಸಿದೆ.

ಅಷ್ಟೇ ಅಲ್ಲದೆ ರೂ.549 ರೀಚಾರ್ಜ್ ಮಾಡಿಕೊಂಡರೆ ಅವರು ಯಾವುದೇ ಮಿತಿ ಇಲ್ಲದೆ 1ಜಿಬಿ ಡಾಟಾವನ್ನು ದಿನದಲ್ಲಿ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಮಾರ್ಚ್ 31ರೊಳಗೆ ರೀಚಾರ್ಜ್ ಮಾಡಿಕೊಳ್ಳುವವರಿಗೆ ಈ ಆಫರ್ ಸಿಗಲಿದೆ.

ರೂ.549 ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ ವಾರಕ್ಕೆ 1200 ನಿಮಿಷಗಳ ಉಚಿತ ಟಾಕ್‌ಟೈಮ್ ನೀಡಲಿದ್ದಾರೆ. ಅದೂ ಸಹ ದಿನಕ್ಕೆ ಕೇವಲ 300 ನಿಮಿಷಗಳಷ್ಟು ಮಾತ್ರ. ಆ ಮಿತಿ ದಾಟಿದರೆ
ನಿಮಿಷಕ್ಕೆ 30 ಪೈಸೆ ಚಾರ್ಚ್ ಆಗುತ್ತದೆ. ವಾರದಲ್ಲಿ ಒಂದೇ ನಂಬರ್‌ಗೆ 100 ಬಾರಿ ಕರೆ ಮಾಡಿದರೆ 101ನೇ ಕರೆಯಿಂದ ನಿಮಿಷಕ್ಕೆ 30 ಪೈಸೆ ಹೆಚ್ಚುವರಿ ವಸೂಲಿ ಮಾಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :