ನವದೆಹಲಿ : ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಮಹಾರಾಜ ಬಿಸಿನೆಸ್ ಕ್ಲಾಸ್ ಸೀಟುಗಳ ಸೇವೆಯನ್ನು ಆರಂಭಿಸಿದೆ. ಈ ಹೊಸ ಸೇವೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಲಭ್ಯ. ಈ ಹೊಸ ಸೇವೆ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಹಾಯಕ ಸಚಿವ ಜಯಂತ್ ಸಿನ್ಹಾ ವಾರದ ಆರಂಭದಲ್ಲಿಯೇ ಪ್ರಕಟಿಸಿದ್ದರು. ಮೊದಲ ದರ್ಜೆ ಮತ್ತು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಸೇವೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮಹಾರಾಜ ಬಿಸಿನೆಸ್ ಕ್ಲಾಸ್ ರೂಪುಗೊಂಡಿದೆ.